ಇಂದ್ರಾಣಿ

1 ಸಪ್ತಮಾತೃಕೆಗಳಲ್ಲಿ ಒಬ್ಬಳು. 
2. ದೇವತೆಗಳ ಅರಸನಾದ ಇಂದ್ರನ ರಾಣಿ. ಹೆಸರು ಶಚೀದೇವಿ. ಪ್ರಲೋಮನೆಂಬ ಅರಸನ ಮಗಳು. ಜಯಂತ ಈಕೆಯ ಮಗ. ಇಂದ್ರವೃತ್ರನನ್ನು ಕೊಂದು ಬ್ರಹ್ಮಹತ್ಯಾಪಾತಕಕ್ಕೆ ಒಳಗಾಗಿ ಇಂದ್ರಪದವಿಯನ್ನು ಕಳೆದುಕೊಂಡಾಗ ನಹುಷ (ನೋಡಿ- ನಹುಷ) ದೇವಲೋಕಾಧಿಪತ್ಯವನ್ನು ಪಡೆದು, ದುರ್ದೈವದಿಂದ ಶಚಿಯನ್ನು ಮೋಹಿಸಿ ಅಗಸ್ತ್ಯರ ಶಾಪಕ್ಕೆ ಒಳಗಾಗಿ ಇಂದ್ರಪದವಿಯನ್ನು ಕಳೆದುಕೊಂಡ. ಪತಿವ್ರತಾಸ್ತ್ರೀಯರ ಮಹಾತ್ಮ್ಯದ ವಿಚಾರದಲ್ಲಿ ಈಕೆ ಸೂರ್ಯನೊಂದಿಗೆ ಸಂವಾದ ಮಾಡಿದಳೆಂದು ಭಾರತದಲ್ಲಿ ಹೇಳಿದೆ.												

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ